ಹಳದಿ ಲೋಕ ಚಿನ್ನದ ಧಾರಣೆ (Gold price) ಮತ್ತೆ ಗಗನಮುಖಿಯಾಗಿದೆ. ಕಳೆದ ವರ್ಷದಿಂದ ಒಂದೇ ಸಮ ಏರಿಕೆ ಹಾದಿಯಲ್ಲಿರುವ ಬಂಗಾರದ ಬೆಲೆ ಇದೀಗ ಸಾರ್ವಕಾಳಿಕ ಗರಿಷ್ಠ ದಾಖಲೆ ಬರೆದಿದೆ.
ಹಿಂದಿನ ವರ್ಷದ ಅಕ್ಟೋಬರ್ 31ರಂದು 10 ಗ್ರಾಂ ಚಿನ್ನದ ದರವು 82,400 ರೂ.ಗೆ ತಲುಪಿದ್ದು, ಈ ದರವೇ ಇಲ್ಲಿಯ ವರೆಗಿನ ಗರಿಷ್ಠ ದಾಖಲಾಗಿತ್ತು. ಇದೀಗ ಬಂಗಾರದ ಧಾರಣೆ ಮತ್ತೊಮ್ಮೆ ಸಾರ್ವಕಾಲಿಕ ಗರಿಷ್ಠ ಮಿತಿ ದಾಖಲಿಸಿದೆ.
ಇದನ್ನೂ ಓದಿ: RRB Recruitment 2025 : ಹುಬ್ಬಳ್ಳಿ ರೈಲ್ವೇ ಹುದ್ದೆಗಳಿಗೆ ಅರ್ಜಿ ಆಹ್ವಾನ
82,730 ರೂ. ತಲುಪಿದ ಬೆಲೆ
ರಾಷ್ಟç ರಾಜಧಾನಿ ಹೊಸದಿಲ್ಲಿಯ ಚಿನಿವಾರ ಪೇಟೆಯಲ್ಲಿ ನಿನ್ನೆ ಜನವರಿ 22ನೇ ತಾರೀಖು ನಡೆದ ವಹಿವಾಟಿನಲ್ಲಿ ಚಿನ್ನದ ದರ ಭಾರಿ ಏರಿಕೆಯಾಗಿದೆ. ಶುದ್ಧ ಚಿನ್ನದ ಬೆಲೆ 10 ಗ್ರಾಂ.ಗೆ (ಶೇ.99.9 ಪರಿಶುದ್ಧತೆ) 630 ರೂ. ಏರಿಕೆಯಾಗಿದ್ದು; 82,730 ರೂ.ಗೆ ಮಾರಾಟವಾಗಿದೆ.
ಆಭರಣ ಚಿನ್ನದ (ಶೇ.99.5 ಪರಿಶುದ್ಧತೆ) ಬೆಲೆ ಕೂಡ ಇಷ್ಟೇ ಪ್ರಮಾಣದಲ್ಲಿ ಜಿಗಿದಿದ್ದು; 82,330 ರೂ. ಆಗಿದೆ. ಸತತ ಆರು ದಿನಗಳಿಂದ ಹಳದಿ ಲೋಹದ ಬೆಲೆ ಏರು ಹಾದಿಯಲ್ಲೇ ಇದೆ. ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆದಾರರಿಂದ ಖರೀದಿ ಹೆಚ್ಚಿರುವುದರಿಂದ ಧಾರಣೆ ಏರಿದೆ ಎಂದು ಅಖಿಲ ಭಾರತ ಸರಾಫ್ ಸಂಘ ಹೇಳಿದೆ.
ಇದನ್ನೂ ಓದಿ: UPI Payment Advice : ಗೂಗಲ್ ಪೇ, ಫೋನ್ ಪೇ ಬಳಸುವವರಿಗೆ ಸೈಬರ್ ಕ್ರೈಂ ಪೊಲೀಸರಿಂದ ಎಚ್ಚರಿಕೆ
ಬಂಗಾರದ ಬೆಲೆ ಏರಿಕೆಗೆ ಕಾರಣ
ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆದಾರರಿಂದ ಬೇಡಿಕೆ ಹೆಚ್ಚಿರುವುದರಿಂದ ಸಹಜವಾಗಿಯೇ ಬಂಗಾರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದರ ಜೊತೆಗೆ ಹೂಡಿಕೆದಾರರು ಕೂಡ ಬಂಗಾರದ ಕಡೆಗೆ ಆಕರ್ಷಿತರಾಗಿದ್ದು; ಚಿನ್ನದ ಬೆಲೆ ಏರಿಕೆಯಾಗಲು ಕಾರಣವಾಗಿದೆ.
ಇದರ ಜೊತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ನೀತಿಯು ಅನಿಶ್ಚಿತತೆಯಿಂದ ಕೂಡಿದ್ದು; ಇದು ಹಳದಿ ಲೋಹದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆಗೆ ಹಲವು ಕಾರಣಗಳಿದ್ದು; ಪ್ರಮುಖವಾಗಿ ಆರ್‌ಬಿಐ ಸೇರಿದಂತೆ ಜಗತ್ತಿನ ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿಯ ಭರಾಟೆಯಲ್ಲಿವೆ. ಇದು ಬಂಗಾರದ ಬೇಡಿಕೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ.
CIBIL Score Complete Details : ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ
One Comment